ಕರುನಾಳು ಯಡೆಯೂರ ವಾಸ ಸಿದ್ಧಲಿಂಗೇಶಾ ಪೊರೆಯೋ ಹೇ ಪರಮೇಶಾ ದೇವಾದಿದೇವಾ


ಕರುನಾಳು ಯಡೆಯೂರ ವಾಸ ಸಿದ್ಧಲಿಂಗೇಶಾ ಪೊರೆಯೋ ಹೇ ಪರಮೇಶಾ ದೇವಾದಿದೇವಾ ||ಪ||

ಭವದಲ್ಲಿ ಬಂದೆ ಗತಿ ನೀನು ಮುಂದೆ ತವ ಸೇವೆಯೋಂದೆ ಬೇಡುವೆನು ತಂದೆ ದೇವಾದಿದೇವಾ||1||

ಭಕ್ತಿಯ ಪಥವಾ ಮುಕ್ತಿಯ ನಿಲುವಾ ತೋರಿಸು ಅಥವಾ ಕೃಪೆಯಾಗುದೇವಾ ದೇವಾದಿದೇವಾ ||2||

ವಿರತಿಯ ಭಾನು ಶರಣ ಸುರಧೇನು ಪರಶಿವನೇ ನೀನು ಶರಣೆಂಬೆ ನಾನು ದೇವಾದಿದೇವಾ|3||

ಶಿವಮಂತ್ರ ಪ್ರಾಣ ನೀನೆ ಪ್ರಮಾಣ ತವನಾಮ ಸ್ಮರಣ ಭವತಾಪ ಹರಣ ದೇವಾದಿದೇವಾ ||4||

ತನುಮನ ಧನವು ನಿನಗೆ ಅರ್ಪಣವು ಕರುಣೆ ನಿನ್ನೊಲವು ಇರಲೆಮಗೆ ಬಲವು ದೇವಾದಿದೇವಾ ||5||

ಜಗದೇಕ ಗುರುವೇ ಜಗವ ತುಂಬಿರುವೆ ನೆನಸಿದಲ್ಲಿರುವೆ ಹೇ ಕಲ್ಪತರುವೆ ದೇವಾದಿದೇವಾ ||6||