#

ಎಲ್ಲಿ ಹೋಗುವಿರಿ ನಿಲ್ಲಿ ಮಾನವರೆ

ಎಲ್ಲಿ ಹೋಗುವಿರಿ ನಿಲ್ಲಿ ಮಾನವರೆ ಮಂದ ಮತಿಗಳಾಗಿ ಬೆಳಗುತಿದೆ ಶಿವ ದೀಪ ನೀಲಜ್ಯೋತಿಯ ದಿವ್ಯಜ್ವಾಲೆಯಾಗಿ ದಿವ್ಯಜ್ವಾಲೆಯಾಗಿ||ಪ||

ಭುವಿಯಲ್ಲಿ ಬಂದು ಬವದಲ್ಲಿ ಬೆಂದು ಬಸವಳಿದು ಬಾಳಬಹುದೇ ಕಾಯಕವ ಮರೆತು ಶಿವಪೂಜೆಯನು ಕುರಿತು ಶಿವನಾಗಿ ಬೆಳಗಬಹುದೇ ಶಿವನಾಗಿ ಬೆಳಗಬಹುದೆ||1||

ಕಾಮಿನಿಯ ಮಾಯೆ ಕಾಂಚಣದ ಛಾಯೆ ನಿಜವೆಂದು ನಂಬಬಹುದೇ ಸಂಸಾರ ಸೊಡರು ಜಗಕಿಟ್ಟ ತೊಡರು ಅದ ಬಿಟ್ಟು ಬಾಳಬಹುದೇ ಅದ ಬಿಟ್ಟು ಬಾಳಬಹುದೆ ||2||

ನಿನ್ನಲ್ಲಿ ಮಿಣಕು ಶಿವನಲ್ಲಿ ಬೆಳಕು ಒಂದಾಗಿ ಬೆಳಗಬೇಕು ಇಹದಲ್ಲಿ ಮಿಳಿತು ಪರರಲ್ಲಿ ಬೆರೆತು ಪರಮಾತ್ಮನಾಗಬೇಕು ಪರಮಾತ್ಮನಾಗಬೇಕು ||3||

ಕುಣಿ ಕುಣಿದು ಬನ್ನಿ ನಲಿ ನಲಿದು ಬನ್ನಿ ಶಿವಧಾಮ ಇದುವೆ ಎನ್ನಿ ಅಂಧಜೀವರಿಗೆ ಬೆಳಕು ಮಾಡುವುದೇ ಶಿವನ ದೀಪವೆನ್ನಿ ಅದುವೇ ಶಿವನ ದೀಪವೆನ್ನಿ ||4||