#

ಸಿಂದಗಿ ಮಠದ ಶಾಂತಿ ಮಂದಿರದ ಮುತ್ತೊಂದು

ಸಿಂದಗಿ ಮಠದ ಶಾಂತಿ ಮಂದಿರದ ಮುತ್ತೊಂದು ಇತ್ತ ಆ ಮುತ್ತಿನ ಬೆಳಕು ಸುತ್ತ ನಾಡಿನ ಜಗವೆಲ್ಲ ತುಂಬಿತ್ತ ||ಪ||

ಸತ್ಯ ಶ್ರೀಗುರು ಶಾಂತವೀರನ ಕೀರ್ತಿಯು ಹರಡಿತ್ತ ಸ್ವಾಮಿಯು ವಾಸಿಸೋ ಆ ನೆಲ ನಂದನವನದಂತೆ ಇತ್ತ ||1||

ಸ್ವಾಮಿಯ ಕರುಣೆಯು ಭಕ್ತಿಯ ಕೊನೆಯಲ್ಲಿ ಅಡಗಿತ್ತ ಭಕ್ತರೆ ಬರಲಿ ಶಿಷ್ಯರೆ ಬರಲಿ ಸತ್ಕಾರವು ಇತ್ತ||2||

ಹಣೆಯಲಿ ವಿಭೂ

ಕಾಡಶೆಟ್ಟಿ ಹಳ್ಳಿ ಸಣ್ಣ ತಮ್ಮಪ್ಪಗೆ ಕಂಟಕ ಬಂದಿತ್ತ ಜಪವನ್ನು ಮಾಡಿ ಕಂಟಕ ಕಳೆಯಲು ಹರುಷವು ತುಂಬಿತ್ತ ||3||

ಧರೆಯೊಳು ಮೆರೆಯುವ ಹಾವೇರಿಪುರದೊಳು ಗುರುತತ್ವವು ಇತ್ತ ಆ ಗುರುತತ್ವವು ಶಾಂತವೀರನೆಂಬ ನಾಮದೊಳಡಗಿತ್ತ