#

ಶಿವಲಿಂಗ ಪೂಜಿಸಯ್ಯಾ ಭವ ರೋಗವನ್ನು ಕಳೆವ

ಶಿವಲಿಂಗ ಪೂಜಿಸಯ್ಯಾ ಭವ ರೋಗವನ್ನು ಕಳೆವ||ಪ||

ಚಿರಸೌಖ್ಯಗಾಗಿ ಮುದದಿ ಗುರು ಸೇವೆಯನ್ನು ಮಾಡಿ ಗುರು ಪಾದವನ್ನು ಸ್ಮರಿಸಿ ಗುರು ಕರಣದಿಂದ ಪಡೆದ ||1||

ಶಿವಲಿಂಗ ಪೂಜೆಯಿಂದ ಶಿವಲಿಂಗ ಧ್ಯಾನದಿಂದ ಶಿವಲಿಂಗ ನೋಟದಿಂದ ಶಿವಪದವು ಸಿಗುವುದಯ್ಯಾ ||2||

ಶಿವಲಿಂಗ ಪೂಜೆಗೈದು ಶಿವಶರಣರೆಲ್ಲ ಧರೆಯೊಳ್ ಶಿವರೂಪದಿಂದ ಬಾಳಿ ಶಿವಪದವ ಪಡೆದರಯ್ಯಾ ||3||

ಬೋದವ ಕೊಡು

ಬೋದವ ಕೊಡುದೇವ ಈ ಮನಕೆ ಶಿವಯೋಗದ ಸುಸ್ವಾದವ ತಿಳಿಯುವ||ಪ||

ಹೊನ್ನಿನ ಹೆಣ್ಣಿನ ಬ್ರಾಂತಿಯ ದೂಡಿ ಜಂಗಮಾರ್ಯನ ಅಂಗ ಸೇವಿಸುವ ||1||

ಜ್ಞಾನ ಬಲಿದು ಭವಬಾಧೆಯ ನೀಗಿ ಬೇಗ ಮೋಕ್ಷದ ಮಾರ್ಗ ಹಿಡಿಯುವ ||2||

ವರಮಠಧೀಶನೆ ತೋಂಟದಾರ್ಯನೆ ಬೇಗ ಅಂಗವು ಲಿಂಗ ಬೆರೆವ ||3||

ತೋಂಟದಕವಿ.,,,,,,,,,,,,,,,,,,,,,