#

ಎಂತವನೆ ಗುರುರಾಯ

ಎಂತವನೆ ಗುರುರಾಯ ಶಾಂತಿ ಸದ್ಗುಣ ನಿಲಯ ಚಿಂತೆಯ ಬಿಡಿಸುವ ಶಾಂತವೀರೇಶ ||ಪ||

ಕಂತು ಮರ್ದನ ರೂಪ ಕನ್ನಡ ನಾಡಿನ ದೀಪ ದಯವ ತೋರುವ ದಯನಂದ ಚರೇಂದ್ರ ||1||

ಭವದ ಭಕ್ತರಿಗೆಲ್ಲಾ ಭವದ ರೋಗವ ಕಳೆದು ಹರನ ತೋರಿಸಿ ಮುಕ್ತಿ ಮಾರ್ಗವ ತೋರುವ||2||

ಮಾತೃವಾತ್ಸಲ್ಯವನು ವಟುಗಳಿಗೆ ತೋರುತ್ತ ಶಾಸ್ತ್ರ ಪುರಾಣವ ಕಲಿಸಿದ ಗುರುವರ||3||

ಬಾವಿಯೊಳು ಕಳೆದಿರುವ ಲಿಂಗವನು ಕರುಣಿಸಿ ವಟುವಿನ ಪ್ರಾಣವ ಉಳಿಸಿದ ಚರವರ

ಹಾವೇರಿ ಪುರದೊಳಗೆ ಸಿಂದಗಿಯ ಮಠದಲ್ಲಿ ಶೋಬಿಪ ಶ್ರೀ ಗುರು ಶಾಂತವೀರೇಶ||5||

.,,,,,,,,,,,,,,,,,,,,,