#

ಎಂತವನೆ ಗುರುರಾಯ

ಅಪ್ಪಾ ಶಿವಯೋಗಿಶಾ ತಪ್ಪನ್ನು ಮನ್ನಿಸಿ ಕಾಪಾಡಪ್ಪ||ಪ||

ಇಂಗಳಗಾವಿಯ ಬಾಗೋಜಿ ಮಠದ ನೀಲಾಂಬರಾಚಾರ್ಯ ಉದರದಿ ಜನಿಸಿ ಅಥಣಿಯ ಪುರದ ಗಚ್ಚಿನಮಠದಾ ಮರುಳಶಂಕರ ದೇವರ ಕೃಪೆಯೆ ಪಡೆದೆಪ್ಪಾ ||1||

ತೇಲಸಂಗ ಗ್ರಾಮದ ಶಿವಬಸವ ದೇಶಿಕರ ಕೃಷ್ಠರೋಗ ಹೃದಯ ಕಳೆದ ನನ್ನಪ್ಪಾ ಗುರು ಶಾಂತ ಪ್ರಭುವಿನ ಚರದೀಕ್ಷೆ ಪಡೆದು ದೇಶ ಸಂಚಾರಕ್ಕೆ ನಡೆದೆ ನನ್ನಪ್ಪ||2||

ಚನ್ನವೀರಾರ್ಯರಿಗೆ ಚಿನ್ನುಲಾದ್ರಿಯಪೀಠ ಜಗದೇಕ ಗುರುವೆಂದು ಹರಸಿದೆಯಪ್ಪಾ ಜಯದೇವ ಮುರುಘ ನಾಮದಿಂದ ಜಗವನುದ್ಧಾರವ ಮಾಡಿದಿಯಪ್ಪ||3||

ಯೋಗಮಂಟಪದಲ್ಲಿ ಬಸವಪುರಾಣವ ಪಠಿಸುತ್ತಾ ನೀನು ಕುಳತೀದಿಯಪ್ಪಾ ಶಿವಜಂಗಮ ರೂಪಾ ತಾಳಿ ತಾ ಬರಲು ಹೋಳಿಗೆ ಶಿಕರಣಿ ಉಣಿಸಿದಿಯಪ್ಪಾ||4||

ಅಥಣಿಯ ಪರದಜಗದೊಡೆಯ ನೀನು ಹಾವೇರಿಪುರದಲ್ಲಿ ನೆಲಸಿದೆಯಪ್ಪಾ ಏಳುತನೆನೆವೆ ಬಿಳುತನೆನೆವೆ ಮುರುಘಶ ನೀ ಎನ್ನ ಕಾಪಾಡಪ್ಪ

||5||