#

ಹಾನಗಲ್ ಗುರುಕುಮಾರ

ಹಾನಗಲ್ ಗುರುಕುಮಾರ ಸ್ವಾಮಿ ನಿಮಗೆ ವಂದನೆ ಸಮಾಜ ಸೇವೆಗಾಗಿ ಮಹಾ ತ್ಯಾಗಮಯ ಜೀವನಾ||ಪ||

ಎನ್ನತನುಮನ ನಿಮ್ಮ ಪಾದಕರ್ಪಣಾ ಸ್ವಾಮಿ ನೀವು ಪಾದವಿಟ್ಟ ನೆಲವು ಪಾವನಾ ಅಂತ ಶಿವಯೋಗಮಂದಿರದ ಸ್ಥಾಪನಾ ||1||

ಶಿವಯೋಗ ಸಿದ್ದಗಾಗಿ ನಿಮ್ಮ ಕೃಪೆಯ ಪುಣ್ಯಧಾಮ ಇಂದುಜಗದಿ ಬೆಳಗುತಿದೆ ದಿವ್ಯಜ್ಯೋತಿ ಕಿರಣಾ ಪುಣ್ಯಜೀವನಾ ನಿಮ್ಮ ನೆನಹು ಮನುಜನಾ||2||

ವೀರ ವಿರಕ್ತನಾಗಿ ಶಿವಯೋಗ ಸಾಧನಾ ವಾಹನವನೇರದಂತ ಕಿಂಕರಾತ್ಮನಾ ಯಾರು ನಿನಗೆ ಸಾಟಿ ಗುರುಕುಮಾರದೇವನಾ||3||

ಬಾರೋ ಮತ್ತೆ ಧರಣಿಬಯಸಿದೆನ್ನಹೃನ್ಮನಾ ಲೀಲ ಲೋಲನಾ ಸ್ವಾಮಿ ಗುರುಕುಮಾರನಾ ಗುರು ವಿರಕ್ತರೆಂಬ ಭೇದವೆನಸದವನಾ||4||

ಗುರುವಿನ ಗುರುವಂದೆ ಮಹಾಯೋಗಿವರ್ಯನಾ ಕರುಣೆ ಹಾನಗಲ್ ಗುರುಕುಮಾರ ದೇವನಾ ವರದ ಬಲವು ವಿಶ್ವ ನರೇಗಲ್ ಚೇತನಾ ಕರವ ಮುಗಿವೆನಾ ಶಿರಬಾಗಿ ನಮಿಪೆನಾ

||5||