#

ನನ್ನಿಯಂ ನೆನೆಯತ

ನನ್ನಿಯಂ ನೆನೆಯುತ ಕಾಲವ ಕಳೆವೆ ಬಸವನ ಬರುವಿನ ಬಯಕೆಯ ಹಿಡಿದು ಶರಣರ ನುಡಿಯ||ಪ||

ನಡೆಯಲಿ ಬಡತನ ನುಡಿಯಲಿ ಸಿರಿತನ ಎಮ್ಮೊಳಗೇನು ಹುರುಳಿಲ್ಲ ನೋಡಾ ಜಗದೊಳಗೇನು ಹುರುಳಿಲ್ಲ ನೋಡಾ ಬಸವಣ್ಣ ಬಾರೋ ಜಗದಣ್ಣ ಬಾರೋ ||1||

ಕೊಲ್ಲುವ ಮಾದಿಗ ಹೊಲಸು ತಿಂಬುವ ಹೊಲೆಯ ಕುಲವೆನೆಂಬುದು ಸಕಲ ಜೀವಾತ್ಮರಿಗೆ ಲೇಸನೆಬಯಸಿದ ಬಸವಣ್ಣ ಬಾರೋ ಬಸವಣ್ಣ ಬಾರೋಜಗದಣ್ಣ ಬಾರೋ||2||

ಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಯ್ಯ ಇಲ್ಲಿ ಸಲ್ಲುವರಿಗೆ ಯಾರಿಲ್ಲವಯ್ಯ ಅಲ್ಲಿ ಸಲ್ಲುವಂತೆ ಪಥವನು ತೋರುವ ಬಸವಣ್ಣ ಬಾರೋ ಜಗದಣ್ಣ ಬಾರೋ||3||

ಬಾರೋ ಮತ್ತೆ ಧರಣಿಬಯಸಿದೆನ್ನಹೃನ್ಮನಾ ಲೀಲ ಲೋಲನಾ ಸ್ವಾಮಿ ಗುರುಕುಮಾರನಾ ಗುರು ವಿರಕ್ತರೆಂಬ ಭೇದವೆನಸದವನಾ||4||