#

ನನ್ನಿಯಂ ನೆನೆಯತ

ಗುರುವಿನ ಮಹಿಮೆಯ ತಿಳಕೊಂಡೆ ನಾ ಬೇಕಾದ ವರವನು ಪಡಕೊಂಡೆ ಆಜ್ಞೆ ಪ್ರಕಾರ ನಡಕೊಂಡೆ ನಾ ಸುಜ್ಞಾನಿಗಳನ್ನು ಕೂಡಿಕೊಂಡೆ||ಪ||

ದುರುಳರ ಸಂಗವ ಹರಕೊಂಡೆ ನಾ ಶರಣರ ಸಂಗವ ಸೇರಿಕೊಂಡೆ ಗುರುವಿನ ಪಾದವ ಹಿಡಕೊಂಡೆ ನಾ ಕರಣ ಪ್ರಸಾದವ ಪಡಕೊಂಡೆ ||1||

ಸತ್ಯವಂತರ ಸಂಗ ಕೂಡಿಕೊಂಡೆ ನಾ ಭಕ್ತಿ ಭಾವದಿಂದ ನಡಕೊಂಡೆ ನಿತ್ಯ ಸೇವೆ ನಾ ಮಾಡುತಿದ್ದೆ ಗುರು ಮುಕ್ತಿ ಭಾಗ್ಯವ ಪಡಕೊಂಡೆ||2||

ಆರು ಗುಣಗಳ ಅಟುಬಿಟ್ಟೆ ನಾ ಮೂರು ಗುಣಗಳ ಬಿಟ್ಟು ಕೊಟ್ಟೆ ಗುರು ಸ್ಮರಣೆಯಲಿ ಮನಸಿಟ್ಟೆ ನಾ ಗುರುಪಾದಡಿಯಲಿ ಶಿರವಿಟ್ಟೆ||3||