#

ಜಾನಪದ ಪದ್ಯ

ಒಳ್ಳೆವರ ಗೆಳೆತನ ಕಲ್ಲುಸಕ್ಕರೆಹಾಂಗ ಕೆಟ್ಟವರ ಗೆಳೆತನ ಮಾಡಿದರು ನನಕಂದ! ಸಲ್ಲದ ಮಾತು ಬರತಾವ||ಪ||

ಮಂದಿಮಕ್ಕಳೊಳಗ ಚೆಂದಾಗಿ ಇರಬೇಕ ನಂದಿಯ ಶಿವನ ದಯದಿಂದ | ಹೊಗಾಗ ಮಂದಿ ಬಾಯಾಗ ಇರಬೇಕ ||1||

ಕೊಟ್ಟು ಕುದಿಯಲುಬೇಡ ಇಟ್ಟುಹಂಗಿಸಬೇಡ ಎಷ್ಟುಂಡರೆಂದು ಅನಬೇಡ ಈ ಮೂರು | ಮುಟ್ಟಾವ ಶಿವನ ಸದರಿಗೆ||2||

ಹಿರಿಯರಿಗೆ ಹಿರಿಯನ್ನು ಕಿರಿಯರಿಗೆ ಕಿರಿಯನ್ನು ನೆರೆಗಡ್ಡ ಮುದುಕರ ಕಂಡರ | ತಲೆ ಬಾಗಿ ನಡೆಯೋ ನನಕಂದ||3||

ಆಚಾರಕ್ಕರಸಾಗು ನೀತಿಗೆ ಪ್ರಭುವಾಗು ಮಾತಿನಲ್ಲಿ ಚೂಡಾಮಣಿಯಾಗು ನನಕಂದ | ಜ್ಯೋತಿಯೇ ಆಗು ಜಗಕ್ಕೆಲ್ಲ||4||