#

ಅಪ್ಪಾ ಶಾಂತವೀರೇಶಾ

ಅಪ್ಪಾ ಶಾಂತವೀರೇಶಾ ಶಾಂತಿಸಾಗರವೇ ನೀನೇ ಅಪ್ಪಾ ||ಪ||

ಶ್ರೀ ಕುಮಾರೇಶನ ಅಪ್ಪಣೆಯಪಡೆದು ಶಿವಬಸವ ಪ್ರಭುವಿನ ಕೃಪೆಯ ಪಡೆದಪ್ಪಾ ದೇಶ ದೇಶವ ಸುತ್ತಿ ದೀಕ್ಷೆಯ ಮಾಡುತ್ತೆ ಗುರುವಾಗಿ ಜಗದಲ್ಲಿ ನೆಲಸಿದಿ ಅಪ್ಪಾ ||1||

ಹಾವೇರಿ ಪಟ್ಟಣದ ರುದ್ರಭೂಮಿಯಲ್ಲಿ ಭದ್ರವಾದ ಶಾಲೆ ಕಟ್ಟಿದೆ ಅಪ್ಪಾ ಧಾರ್ಮಿಕ ಕಾರ್ಯಗಳ ವಚನ ಸಾಹಿತ್ಯದ ವಿದ್ಯೆ ಕಲಿಯಲು ಕೃಪೆಯ ಮಾಡಿದಿ ಅಪ್ಪಾ||2||

ಎಲ್ಲೂರ ಗ್ರಾಮದ ಗೌಡರ ಮನೆಯಲ್ಲಿ ಬಾಲನೋರ್ವನು ಹರಣ ನೀಗಿರಲು ಅಪ್ಪಾ ಕರುಣದಿ ಕೇಳಿ ಧಾವಿಸಿ ಬಂದು ಪಾದೋಕದಿ ಪ್ರಾಣ ಉಳಿಸಿದಿ ಅಪ್ಪಾ||4||

ಎಲ್ಲೂರ ಗ್ರಾಮದ ಗೌಡರ ಮನೆಯಲ್ಲಿ ಬಾಲನೋರ್ವನು ಹರಣ ನೀಗಿರಲು ಅಪ್ಪಾ ಕರುಣದಿ ಕೇಳಿ ಧಾವಿಸಿ ಬಂದು ಪಾದೋಕದಿ ಪ್ರಾಣ ಉಳಿಸಿದಿ ಅಪ್ಪಾ ಶಿವನ ಪಾದವ ನೀನು ಸೇರಿದಿ ಅಪ್ಪಾ||5||