#

ಬಸವ ಸ್ತುತಿ

ಸ್ವಾಮಿ ಗುರುವೇ ಬಸವ ಶ್ರೀ ಗುರುಧರ್ಮ ಗುರುವೇ ಬಸವ ||ಪ||

ಆದಿಗುರುವೇ ಬಸವ ಅನಾದಿಗುರುವೇ ಬಸವ ಪ್ರಮಥಗುರುವೇ ಬಸವ ಪರಮಾರ್ಥ ನಿಧಿಯೇ ಬಸವ ||1||

ಜಗದಾದಿ ಜಗದ ಗುರುವೇ ಜಗಜನದ ಕಲ್ಪತರುವೆ ಸರ್ವಾಂಗ ಲಿಂಗ ವಿಭುವೇ ಮಮಭಾಗ್ಯ ನೀನು ಪ್ರಭುವೆ||2||

ವಚನ ಸುಧೆಯ ನಿಧಿಯೇ ಅನುಭಾವತೇಜ ರವಿಯೇ ಕಲ್ಯಾಣ ಕಲ್ಪ ದೊರೆಯೇ ಕಾರುಣ್ಯ ಶರಣಾಮಣಿಯೇ||3||

ಕಾಯಕವೇ ಕರುಣಾಮೂರ್ತಿ ದಾಸೋಹತತ್ವಸೂರ್ತಿ ಇಷ್ಟಲಿಂಗ ಜನಕ ಕೀರ್ತಿ ಮನುಕುಲ ಮಹಾಂತಮೂರ್ತಿ||4||

ನವಸ್ಥಾನದೊಳು ತನ್ನ ನವಲಿಂಗವನ್ನು ನೋಡಿ ಶಿವಯೋಗನಂದದಿ ಮೈಮರೆತಾರ ||5||

ಆರು ದಳದ ಕಮಲದಲ್ಲಿ ಹಾರಿ ಬಂದ ಲಿಂಗವೇ ಹರನ ಆತ್ಮ ಲಿಂಗವೇ ಅಡವಿಸ್ವಾಮಿ ಲಿಂಗವೇ ಓಂ ನಮಃ ಶಿವಾಯ ಓಂ ನಮಃ ಶಿವಾಯ||6||

ಗಣಪತಿ ಹಾಡು

ಶ್ರೀ ಗೌರಿಸುತ ಸಿದ್ಧಿ ವಿನಾಯಕ ಮಂಗಳಮೂರುತಿ ಗಣರಾಯ ಮೂಷಕ ವಾಹನ ನಾಗವಿಭೂಷಣ ಪರಮ ದಯಾಗಣ ಶುಭಚರಿತಾ

||1||

ಸರ್ವ ಕಾಲದಲ್ಲಿ ಸರ್ವ ಕಾರ್ಯದಲ್ಲಿ ಶಕ್ತಿಗಿಂತಲೂ ಯುಕ್ತಿಯೇಮೇಲು ಎಂಬುದು ನರಹಿತ ಶುಭಚರಿತಾ ಮೊದಲಿಗೆ ನಿನ್ನನು ಪೂಜಿಸುತಾ ವಿದ್ಯಾ ಬುದ್ದಿ ಸಮೃದ್ದಿ ನೀಡುತ ಪರಿಪಾಲಿಸು ಹೇ ಗಣನಾಥ||2||

ಎಲ್ಲರು ಸಹಜದಿ ಬಯಸಿದ ಬಯಕೆಯ ಪಡೆವರು ನಿನ್ನನು ಪೂಜಿಸುತಾ ||3||