#

ಸ್ವಾಮಿ ಗುರುವೇ ಬಸವ

ಎಂಥಾಗುರುವು ಬಂದಾನವ್ವ ಜಗವನುದ್ಧಾರ ಮಾಡುತ್ತಾ ||ಪ||

ದೇಶ ಸುತ್ತಿ ಚರಿಸುತ್ತಾ | ದೇಶ ಸುತ್ತಿ ಚರಿಸುತ್ತಾ ಮೈಯಲಿ ಕಾವಿಯ ಉಟ್ಟಾರವ್ವ ನೊಸಲಲಿ ಭಸ್ಮವ ಧರಿಸ್ಯಾರ | ನೊಸಲಲಿ ಭಸ್ಮವ ಧರಿಸಿ ಅವರು ಕಂಠಮಾಲೆಯ ಹಾಕ್ಯಾರ ||1||

ಪಾದದಿ ಆವುಗೆ ಮೆಟ್ಟಾರವ್ವ ಬಗಲಲಿ ಜೋಳಿಗೆ ಹಾಕ್ಯಾರ ಬಗಲಲಿ ಜೋಳಿಗೆ ಹಾಕಿ ಅವರು ಕರದಲಿ ಬೆತ್ತವ ಪಿಡಿದಾರ||2||

ಶಾಂತಿಯ ಕಂತೆಯ ತೊಟ್ಟಾರವ್ವ ಸತ್ಯದ ಸುರಗಿಯ ಹಿಡಿದಾರ ಸತ್ಯದ ಸುರುಗಿಯ ಹಿಡಿದು ಅವರು ದುಷ್ಟರ ಶಿಷ್ಟರ ಮಾಡ್ಯಾರ ||3||

ಮರಣ ಹೊಂದಿದ ಮಗುವಿಗೆ ಹರಣವ ಕೊಟ್ಟು ಕರುಣೆಯ ತೋರೈಾರ | ಕೊಟ್ಟು ಕರುಣೆಯ ತೋರಿ ಅವರು ಹರುಷದ ಹೊನಲ ಸುರಿಸ್ಯಾರ||4||

ಧರೆಯೊಳು ಮರೆಯುವ ಹಾವೇರಿ ಪುರದೊಳು ಸಿಂದಗಿ ಮಠದಿ ನೆಲಿಸ್ಯಾರ ಸಿಂದಗಿ ಮಠದಲ್ಲಿ ನೆಲೆಸಿರುವಂತ ಶಾಂತವೀರಗೆ ನಮಿಸೋಣ ||5||