#

ಸ್ವಾಮಿ ಗುರುವೇ ಬಸವ

ನಿನೇಕೆ ಮರೆಯಾದೆ ಗುರು ಸದಾಶಿವ ಶಿವಕುಮಾರನ ಕುವರ ಶಿವಮಂದಿರದೇವಾ||ಪ||

ನಿನಗಾಗಿ ಮನಮಿಡಿದು ಕರೆಯುತಿದೆ ಜೀವಾ ಶಿವಯೋಗಿ ಜನಿಸಿ ಬಾರೋ ಮರೆಸಲುನೋವಾ ||1||

ಜೀವವೀಣೆ ಮಿಡಿದು ನಿನ್ನ ಸವಿಗೀತೆಯಹಾಡು ಬಾ ಹೃದಯ ಪೀಠ ಶೃಂಗರಿಸೊ ನಿನಗಾಗಿ ಕಾದಿದೆ ಪ್ರಾಣೆಶ್ವರ ಬಂದು ನೆಲೆಸು ದ್ವಿತಿಯ ಬಸವ ತಂದೆ ಹಾನಗಲ್ ಪೀಠದೊಡೆಯ ನಿನಗೆ ಶರಣು ಎಂದೆ||2||

ಪ್ರಳಯವಾಗುವಂತ ಜಗವ ಪ್ರೀತಿಯಿಂದ ಉಳಿಸು ಬಾ ಪ್ರೀತಿಯಲ್ಲಿ ನೀತಿ ತುಂಬಿ ಏಕನಿಷ್ಠೆ ಉಳಿಸು ಬಾ ನಿಜಸೇವೆ ಮಾಡುವಂತ ಭಕ್ತರನ್ನು ಬೆಳೆಸು ಬಾ ನಿಜ ಕಲ್ಪತರು ನೀನು ಬಾಳ ಜ್ಯೋತಿಯಾಗಿ ಬೆಳಗು ಬಾ||3||

ಭಾಗೆವಾಡಿಯಲ್ಲಿ ಲಿಂಗದೊಳಗೆ ಬೆರೆತ ಜಂಗಮ ಯೋಗ ಶೀಲ ಭಕ್ತ ಪಾಲ ಶಿವಯೋಗದ ಸಂಗಮ ವಟುಸಾಧಕರನ್ನು ಬೆಳಸಿ ಸಲುಹು ಬಾರೋಅನುಭವ ಅಂತುರೇಶ ನಿನ್ನ ಪುಣ್ಯದಿನವೆಲ್ಲವೂ ಸಂಭ್ರಮ||4||