#

ಸ್ವಾಮಿ ಗುರುವೇ ಬಸವ

ಪರತರ ಶಿವಲಿಂಗ ವೆಳಸಿ ನಿನಗಾಗಿ ಕರಕಂಜದೊಳು ಕಾಣಿಸಿತು ಯೋಗಿ ಯಜಿಸು||ಪ||

ಮೊದಲು ಪೀಠವೇ ಬಿಂದುವಾಗಿ ಮೇಲೆಸಿದ | ಪೀಠವದು ನಾದವಾಗಿ ಗೋಮುಖವೆ ಸದಮಲ ಕಲೆಯಾಗಿ ಸಕಲ ತೀರ್ಥವೇ ಲಿಂಗ ನಿಜವಾಗಿ ರಜದೊಳುಜ್ವಲಿಪಾಹಿ ||1||

ತರು ವಿಸ್ತಾರವನೊಳು ಗೊಂಡಿರ್ದ ಬೀಜವ ಪರಿಯಂತೆ ರಾರಬ್ಧ ಗಳಿಗಿಂಬು ವಡೆದಾ| ಪರಬ್ರಹ್ಮದಾಶ್ರಯ ವಾಗಿಹ ನಿಜಶಕ್ತಿ ಬೆಳಸಿ ತನಗೆ ತಾನಾಗಿಹ ವಾಗಿರ್ಪ||2||

ಮೂರು ಮಂಡಲವನುಚ್ಚಳಸಿ ಗುಣವರ್ಣ ಮೂರನು ಮೀರಿ ಭೋಧಾ ಮಾತ್ರವಾಗಿ | ತೋರುವ ಗುರು ಶಂಭುಲಿಂಗವದುತಾನೆ ಬೆರೆನಿಸದೆ ನಿನ್ನ ಕಣ್ಣಮುಂದಿಹುದು||3||

ನಿಜಗುಣಶಿವಯೋಗಿಗಳು