#

ಕಂಡಿರೇನಯ್ಯ ಹಾನಗಲ್‌ಧೀಶನ

ಕಂಡಿರೇನಯ್ಯ ಹಾನಗಲ್ ಧೀಶನ ಲಿಂಗೈಕ್ಯರಾದ ಮಹಾನುಭಾವನ ನಂಬಿ ಕರೆದೊಡೆ ಓ ಎನ್ನ ಶಂಭುನ ಸ್ಮರಿಸುವವರಿಗೆ ಘನ ಸಂಜೀವನ||ಪ||

ಗುರುವಾಗಿ ದೇಶ ದೇಶ ಚಲಿಸುವ ಹರನಾಗಿ ನರರ ಪಾಪ ಹರಿಸುವ ಬೇಡಿದಿಷ್ಟಾರ್ಥ ನೀಡಿ ಧರ್ಮ ಬೆಳೆಸುವಾ ಗುರುಲಿಂಗಜಂಗಮರೊಂದೆ ಎನ್ನುವಾ ||1||

ಪರಶಿವನ ಅವತಾರ ಪಾವನ ಮಾಡಿದಿ ಜನಗಳ ಜೀವನ ನಿನ್ನಿಂದ ಈ ಜಗ ಪಾವನ ಹಾಡಿ ಹರಿಸುವವರಿಗೆ ಮುಕ್ತಿ ಸಾಧನ||2||

ಅನ್ನ ದಾಸೋಹದ ನಿತ್ಯನೇಮ ಸತ್ಯ ಶರಣ ಮೇಲಿಟ್ಟ ಪ್ರಾಣ ಶಿವಯೋಗಮಂದಿರ ಧಾಮ ನಿನ್ನ ನಾಮವೇ ಬಹುದೂರ ಸೋಮ||3||

ಎಷ್ಟು ಹೊಗಳಲಿ ಸೃಷ್ಟಿಯಾಧೀಶನ ಶ್ರೇಷ್ಠ ಅಷ್ಟಾವರಣ ಮಹಾಧೀಶನ ಇಷ್ಟಲಿಂಗದೊಳು ಬಯಲಾದೆಯಾ ಎಷ್ಟು ಭಕ್ತರನಗಲಿ ಹೋದೆಯಾ||4||

ವಿರಾಟಪರ ಮಠಾಧೀಶನೆ ಈಶ ಸಮಾಜ ಜಗದ ಪೋಷಣೆ ಶಿವಯೋಗ ಸಾಧಕರ ಘೋಷಣೆ ಶಾಂತಿಯ ಕರುಣಿಸು ಕುಮಾರೇಶನ ||5||