#

ಕಂಡಿರೇನಯ್ಯ ಹಾನಗಲ್‌ಧೀಶನ

ಹರಪೂಜೆ ಗುರು ಸೇವೆ ವರಪುಣ್ಯವಿಲ್ಲದೆ ಬರಿದೇ ಸುಖಭೋಗ ದೊರಕುವದುಂಟೆ ಆತ್ಮ ||ಪ||

ಹಣವಿದ್ದಾಗಲೇ ಭಕ್ತಿ ನೆಣವಿದ್ದಾಗಲೇ ಸೇವೆ ಗುಣವಿದ್ದಾಗಲೇ ಮಾಡಿ ಮುಕ್ತಿ ಪಡೆಯಾತ್ಮ ಒಣಮಾತಾಡಿದರೆಲ್ಲ ಶನಿ ಹರಿದು ಹೋಗುವುದೆ ತ್ರಿನಯನೊಲಿಸುವುದು ಬಹುಕರ ಕಷ್ಟವಾತ್ಮ ||1||

ಹಿಂದಿನ ಪುಣ್ಯವನ್ನು ಇಂದುಂಡುಡಬೇಕಾತ್ಮ ಇಂದಿನ ಪುಣ್ಯವನ್ನು ಮುಂದೂಂಡುಡಬೇಕಾತ್ಮ ಬಂಧನವೇಕಿದಕೆ ಇಂಧುದರನಾಣಿಯಾಗಿ ಸಂದೇಹವಿಲ್ಲವೊ ತಿಳಿಕಂಡೆ ಆತ್ಮ||2||

ಹರಿ ಅಜಸುರರೇಲ್ಲ ಶರೀರ ದಂಡನೆ ಮಾಡಿ ಪರಮಾತ್ಮ ನೊಲಿಸಿದರು ಸುಗಮವಲ್ಲಲೆ ಆತ್ಮ ನರಪಾಪ ಪುಣ್ಯವನು ನರರ ಶರಗಲೇ ಹಾಕಿ ಗುರು ಮಹಾಂತ ಲಿಂಗ ತಾ ಮರೆಯಾಗುತಿರುವ||3||

ಎಷ್ಟು ಹೊಗಳಲಿ ಸೃಷ್ಟಿಯಾಧೀಶನ ಶ್ರೇಷ್ಠ ಅಷ್ಟಾವರಣ ಮಹಾಧೀಶನ ಇಷ್ಟಲಿಂಗದೊಳು ಬಯಲಾದೆಯಾ ಎಷ್ಟು ಭಕ್ತರನಗಲಿ ಹೋದೆಯಾ||4||

ಮುಳಗುಂದ ಬಾಲಲೀಲಾ ಮಹಾಂತ ಶಿವಯೋಗಿಗಳು