#

ಶ್ರೀ ಗುರುವೇ ಯೋಗಿ

ಶ್ರೀ ಗುರವೇ ಯೋಗಿ ಹಾನಗಲ್ ಕುಮಾರ ದೇವ ನಾ ನಮಿಪೆ ||ಪ||

ಜೋಯಿಸರಹರಳಹಳ್ಳಿಯಲ್ಲಿ ನೀಲಮ್ಮನ ಶ್ರೇಷ್ಠ ಗರ್ಭದಲ್ಲಿ ಜನಿಸಿದೆ ಬ್ರಾಹ್ಮಮುಹೂರ್ತದಲಿ ||1||

ಹಾಲಯ್ಯನೆಂಬ ನಾಮದಲಿ ಬಾಲ್ಯದಿ ಸಕಲವಿದ್ಯೆಯನ್ನು ಕಲಿತೆ ಭಿಕ್ಷೆವೃತ್ತಿಯಲಿ ||2||

ಯಳೋಂದರ ಸ್ವಾಮಿಗಳಸೇವಾ ತಿಳಿ ಮನದಿಂದಲೇಮಾಡಿ ಕಳೆದೆ ಮೋಹಜಾಲವನು||3||

ಶ್ರೀ ಶಿವನಯೋಗಮಂದಿರವ ಜವಾದಿ ಲೋಕಸೇವೆಗೆ ನೀ ಶ್ರೀಶಿವನ ನೀನೆ ಸ್ಥಾಪಿಸಿದೆ||4||

ಸಮಾಜ ಸೇವೆ ಮಾಡುತಲಿ ಸಮಾಜ ಸಮಾಜ ವೆನುತಲಿ ಯೋಗಿ ಕುಮಾರ ಬೆರೆತೆ ಶಿವನಲ್ಲಿ||5||