#

ಲಿಂಗಪೂಜೆಯ ಮಾಡಲಿಲ್ಲೊ ಮಂಗ

ಲಿಂಗಪೂಜೆಯ ಮಾಡಲಿಲ್ಲೊ ಮಂಗ ಅದಕ ನಿನಗೊಲಿಲ್ಲೊ ಕೂಡಲಸಂಗ ||ಪ||

ಭಸ್ಮದ ಬೆರಳಚ್ಚು ಮೂಡಲಿಲ್ಲೊ ಹಣೆಗೆ ಭಗವಂತನ ನಾಮ ಸ್ಮರಣೆ ಬೀಳಲಿಲ್ಲೊ ಕಿವಿಗೆ ||1||

ಆಚಾರವಂತರನು ಅತಿಯಾಗಿ ಕಾಡಿದೆ ನೀಚರೊಳಗೆ ನೀನು ಒಂದಾಗಿ ನಡೆದೆ ||2||

ಒಮ್ಮೆಯಾದರು ಬರಲಿಲ್ಲೊ ಗುರುವಿನ ಮಠಕ ಗುರುವಿನ ನೆನೆಲಿಲ್ಲೊ ನಿನೆಂಥ ಕಟುಕ||3||

ಅಜ್ಞಾನ ದಾರಿಯನು ಹಿಡದಿದಿಯಲ್ಲೊ ಸುಜ್ಞಾನ ದಾರಿಯನು ಮರತಿದಿಯಲ್ಲೊ||4||

ಏನಾದ್ರು ಬೊಗಳತೈತಿ ನಿನ ಬಂಡಬಾಯಿ ನಿನಗಿಂತ ಮೇಲಾಯ್ತು ಕೀಳುಳ್ಳ ನಾಯಿ||5||

ಮಾಡಿದಾಟಕ್ಕೆ ನಿನ್ನ ಹಡೆದ ತಾಯಿ ಕಣ್ಣೀರ ಹಾಕುವಳು ನಿನ್ನ ಹಡೆದ ತಾಯಿ||6||