#

ಅನ್ನದ ಮಹತ್ವ

ಅನ್ನವು ನಿನ್ನಲಿ ಇರುತನಕೆಲ್ಲರು ನನ್ನವರುತನ್ನವರು ಎನ್ನುವರು ಅನ್ನವು ನಿನ್ನಲಿ ತೀರಿದ ಮರುದಿನ ನಿನ್ನವರೆನ್ನವರಾರಿಹರು ||ಪ||

ಮಡದಿ ಮಾಡುವಳು ಕಡು ಪ್ರೇಮವನು ಉಣುವದುಡುವದನು ನೀಡುತನಕ ಕಡಿಮೆಯಾಗಲುಗಡಬಡಮಾಡುತ ಬಡದಾಡಿ ಬರುವಳುಬಾಗಿಲಕ ||1||

ಹೆತ್ತತಾಯಿತಂದೆ ಮೆತ್ತಂದುಕೊಡುವಾಗ ಮುತ್ತೊಂದು ಹಡೆದೆವುಎನ್ನುವರು ಸ್ವತ್ತೆಲ್ಲ ಕಳಕೊಂಡು ಹೊಟ್ಟೆಗಿಲ್ಲದಿರುವಾಗ ಕುತ್ಯಾಕ ಹುಟ್ಟಿತುಎನ್ನುವರು ||2||

ಊರಿನಜನರೆಲ್ಲಕಾಂಚಣಇರುತನಕ ಇಂದ್ರಚಂದ್ರನೆಣದುಕರೆಯುವರು ಕರದೊಳು ಕಾಂಚನ ತೀರಿದ ಮರುದಿನ ಹಿಂದಕ್ಕೆ ಬಹೂದೂರಸರೆಯುವರು||3||

ನಡೆಯುವ ಕಾಲಕೆ ನೆಗಡಿಯು ಬಂದರೆ ಎಡೆಯನುಕೊಟ್ಟುಕೊಟ್ಟು ಹೋಗುವರು ಬಡತನ ಬಂದರೆ ಮನೆಕಡೆ ನೋಡದೆ ಹಿಡಿಅನ್ನಕೊಡುದಿಲ್ಲ ಯಾರಾರು||4||

ಬಂಧು ಬಳಗವೆಂದು ತಿಂದುತಿಂದು ಹೋಗುವರು ಚಂದಾಗಿ ಮನೆಯಲಿಇರುತನಕ ಬಂದಂತಕಷ್ಟದಲಿ ಹೇಳುಕೇಳುವರಾರು ತಿಂದುಣ್ಣುವತನಕ ನನ್ನವರು||5||

ಒಡ್ಡ ಹೊಲಯತಾನುದುಡ್ಡನ್ನು ಕೊಡುವಾಗ ದೊಡ್ಡವ ನಮ್ಮಪಎನ್ನುವರು ದುಡ್ಡಲ್ಲಿತಿರಿದಾಗಗಡ್ಡ ಬೆಳ್ಳಗಾದಾಗ ದಡ್ಡ ಮುಂಡೆ ಮಗನಿವನೆನ್ನವರು||6||

ದುಡ್ಡು ಬಹಳಿರುವಾಗ ಹೆಂಡತಿ ಸತ್ತರೆ ಅಡ್ಡಾಡಿ ಮಣ್ಣಿಗೆಕರೆಯುವರು ದುಡ್ಡೆಲ್ಲರಿದಾಗ ಸತ್ತಾಗಯಾರಾರು ಹಿಡಿ ಮಣ್ಣು ಹಾಕದೆ ಹೋಗುವರು||7||

ಅನ್ನದ ಮಹಿಮೆಯಚೆನ್ನಾಗಿ ತಿಳಕೊಂಡು ಅನ್ನವೇ ಮಹಾದೇವ ಎನಬೇಕು ಅನ್ನದ ಮುಂದಿನ್ಯಾವದೇವರುಇಲ್ಲ ಚೆನ್ನುಡಿ ಬಸವನ ಕೇಳಬೇಕು ||8||