#

ಗುರುಕರುಣತ್ರಿವಿಧಿ

ಶ್ರೀ ಗುರುವೆ ಸತ್ಕಯೆಯ | ಆಗರವೆ ಸುಜ್ಞಾನ ಸಾಗರವೆಎನ್ನ-ಮತಿಗೆ ಮಂಗಳವಿತ್ತು ರಾಗದಿಂ ಬೇಗ ಕೃಪೆಯಾಗು ||ಪ||

ಗುರುವೆ ಭಕ್ತರಕಲ್ಪ | ತರುವೆ ಸಜ್ಜನ ಮನೋ ಹರವೆ ನಿಜಭಕ್ತಿ-ಜ್ಞಾನವೈರಾಗ್ಯಮಂ ದಿರವೆ ಮದ್ಗುರುವೆಕೃಪೆಯಾಗು ||1||

ದೇಶಿಕನೆ ಅನುಭಾವೋ | ಕ್ಲಾಸಕನೆ ಸಂಕಲ್ಪ ನಾಶಿಕನೆ ಆಣವಾದಿ ಮಲದೊಳ್ ನಿ ರಾಶಕನೆ ಎನಗೆ ಕೃಪೆಯಾಗು ||2||

ಕಾರ್ಯಕಾರಣ ಭಕ್ತಿತೂರ್ಯತಾಮಸದ ಚಿ। ತ್ತೂರ್ಯಎಡರಿಂಗೆಧೈರ್ಯವಾಗಿಹಗುರು ವರ್ಯ ನೀನೆನಗೆ ಕೃಪೆಯಾಗು||3||

ಸಾಧ್ಯ ಸದ್ಭಕ್ತರ್ಗೆ | ವೇದ್ಯ ಲಿಂಗೈಕ್ಯರ್ಗೆ ಭೇದ್ಯ ಸಮಥ-ಗಣನಿಕರವೆಲ್ಲಾ ರಾಧ್ಯ ನೀನೆನಗೆ ಕೃಪೆಯಾಗು||4||

ನಗುರೋರಧಿಕ”ವೆಂದು | ಜಗದಲ್ಲಿಸಾರುತಿಹ ನಿಗಮ ಶ್ರುತಿಗೇಳಿ-ಗುರುವೆ ನಾ ನಿಮ್ಮಪದ ಯುಗವ ಬಣ್ಣಿಪೆನುಕೃಪೆಯಾಗು||5||

ಹರನಿಂದಲಧಿಕ ಸದೈುರುವೆಂಬುದನು ಕೇಳಿ ಗುರುವೆ ನಾ ನಿನ್ನ ಚರಣವನು ನುತಿಸುವೆನು ಕರುಣದಿಂದೆನಗೆಕೃಪೆಯಾಗು||6||

ಎಲ್ಲದೈವಕೆ ನಿಮ್ಮ | ಮೆಲ್ಲಡಿಯೇಘನವೆಂದು ಸೊಲ್ಲಿಗೊಮ್ಮೊಮ್ಮೆನುತಿಪೆ ನಾಂ ಗುರುರಾಯ ಸಲೀಲೆಯಿಂದಕೃಪೆಯಾಗು||7||

ನರಜೀವಿಗಳಿಗೊರ್ವ | ಹರನೆಕಾರಣಕರ್ತ ಶರಣ ಸಂತತಿಗೆ-ಗುರುವೆ ನೀಕರ್ತನೆಂ ದೆರಗಿರ್ಪನಡಿಗೆಕೃಪೆಯಾಗು||8||

ಶಿವನ ಸನ್ನಿಧಿಯರ್ಗೆ | ಭವಮರಣವುಂಟೆಂದು ತವೆನಿನ್ನ ಪಾದ ಸನ್ನಿಧಿಯ ಬಯಸಿ ಬಂ ದವನೆನಗೆಗುರುವೆಕೃಪೆಯಾಗು||9||

ಘಂಟೆಯಂ ಪಿಡಿದೋರ್ವ | ಟೆಂಟಿಣಿಸಲು ನಾದ ಮುಂಟಲ್ಲದುಳಿದು-ತಾನಾಗಿಯೆ ನುಡಿಯುವ ದುಂಟೆ ಶ್ರೀ ಗುರುವೆಕೃಪೆಯಾಗು ||10||

ವೀಣಾನೂತನಶಬ್ದ | ಪಾಣಿಯಿಂದೊಗೆವಂತೆ ಜಾಣ ಶ್ರೀ ಗುರುವೆ-ನೀಂ ನುಡಿಸಿದಂತೆ ನಾಂ ಮಾಣದಲೆ ನುಡಿವೆಕೃಪೆಯಾಗು||11||

ಗುಡಿಮಾತಿಗೊಮ್ಮೆಮಾರ್ನುಡಿಯತಾಕೊಡುವಂತೆ | ಒಡೆಯ ನೀ ಹೊಕ್ಕು ನುಡಿಗೊಟ್ಟಪರಿಯೊಳಾಂ ನುಡಿವೆನೈಗುರುವೆಕೃಪೆಯಾಗು||12||

ಯಂತ್ರವಾಹಕನ ಹಸ್ತಾಂತ ಬೊಂಬೆಯು ಪರ ತಂತ್ರದಿಂದಾಡುವಂತಾನಾಡಿಸುವ ಸ್ವ ತಂತ್ರ ಶ್ರೀಗುರುವೆ ಕೃಪೆಯಾಗು||12||

ಸ್ವಾನುಭಾವದ ನೆಲೆಯ | ನಾನೇನ ಬಲ್ಲೆನೆ ನೀನೆ ಒಳ ಹೊಕ್ಕು-ಏನನುಡಿಸಿದೊಡದನೆ ನಾನುಡಿವೆಗುರುವೆಕೃಪೆಯಾಗು||13||

ಪರಕೆ ಪರವಾಗಿರ್ದ | ಪರತತ್ವ ಮೂರ್ತಿಯ ನಿಜ ದಿರವೆ ರೂಪಾಗಿ-ಧರೆಯೊಳಗೆ ಚರಿಸುತಿಹ ಪರಮ ಶ್ರೀ ಗುರುವೆಕೃಪೆಯಾಗು ||14||

ಪಿಂಡವ ಧರಿಸಿ ಬ್ರಹ್ಮಾಂಡವನ್ನೊಳಕೊಂಡು ಪಿಂಡ ಬ್ರಹ್ಮಾಂಡ-ಪರಿಪೂರ್ಣ ನೆನಸಿರ್ಪ(ಅ) ಖಂಡ ಶ್ರೀ ಗುರುವೆಕೃಪೆಯಾಗು ||15||

ನಾಲ್ಕು ಭುವನತುಂಬಿದುದೊಂದು ವದರಂತೆತೋರ್ಪ-ಅಗಣಿತ ಬ್ರಹ್ಮಾಂಡ ಕ್ಕಧಿಕಾರಿಗುರುವೆಕೃಪೆಯು||16||

ಬ್ರಹ್ಮಾಂಡ ನಾದಬಿಂದುಗಳೇಕ | ವಾದ ವಸ್ತುವಿಗೆ ನೀ ನಾದಿ ಚೈತನ್ಯ-ನಾಗಿ ಶೋಭಿಸುತಿಪ್ಪ (ಅ) ನಾದಿ ಶ್ರೀ ಗುರುವೆಕೃಪೆಯಾಗು||17||

ವಸುಧಾಕೃತ್ಯವ ಮಾಳ್ವ | ಶಶಿಭಾನು ಜ್ಯೋತಿಯಿಂ ದೆಸೆವ ಬೆಳಗಿಂಗೆ-ಮೂಲ ಕಳೆಯಾಗಿ ಶೋ ಭಿಸುವ ಶ್ರೀ ಗುರುವೆಕೃಪೆಯಾಗು ||18||

ಜಾತಿಭೇದವನಳಿದು | ನೀತಿ ಮಾರ್ಗವ ಪೇಳಿ ಓತು ಭುವನ-ದಾರಾಧ್ಯನೆನಿಸಿದ ಆ ಜಾತ ಶ್ರೀ ಗುರುವೆಕೃಪೆಯಾಗು||19||

ಜೀವ ಜಾಲಗಳೊಳಗವಾನಾದೊಡೆ ನೀನು ಕೈವಿಡಿದವನೇ-ಪಾವಾನಾತ್ತಕಗುರು ದೇವ ನೀನೆನಗೆ ಕೃಪೆಯಾಗು||20||

ಹಲವು ಮಾತೇನು ನೀನೊಲಿದು ಪಾದದ ನಿಟ್ಟ ನೆಲವೆ ಸುಕ್ಷೇತ್ರ-ಜಲವೆ ಪಾವನ ತೀರ್ಥ ಸುಲಭ ಶ್ರೀ ಗುರುವೆಕೃಪೆಯಾಗು||21||

ಇನ್ನುಳಿದ ಮಾತೇನು | ಮುನ್ನ ನೀನೊಲಿದು ನೀ ಮನ್ನಿಸಿದವನೇ-ಧನ್ಯನಾಗುವನು ಪ್ರ ಸನ್ನ ಶ್ರೀ ಗುರುವೆಕೃಪೆಯಾಗು ||22||

ದೊರೆಯೊಲಿದ ಬಡವಂಗೆ | ಧರೆಯ ಮನ್ನಣೆಯುಂಟು ಗುರುವೆ ನೀನೊಲಿದ-ಶರಣಂಗೆ ಸರಿಯುಂಟೆ ಕರುಣಿ ಶ್ರೀ ಗುರುವೇಕೃಪೆಯಾಗು ||23||

ಕೊರಡುಕೊನರುವುದು ಬಲುಬರಡು ಹಯನಾಗುವುದು ಕುರುಡಂಗೆಕಣ್ಣು-ಬಹುದು ನಿನ್ನೊಲುಮೆ ಎಂ ದರಿದೆನೈಗುರುವೆಕೃಪೆಯಾಗು||24||

ಎರವು ಮಾಡದೆ ನಿಮ್ಮ ಗುರುಪುತ್ರರೊಳಗೆನ್ನ | ಕಿರಿಯ ಮಗನೆಂದು-ಗುರುವೆ ನೀ ಕರವಿಡಿದು ಹರುಷದಿಂದೆನಗೆಕೃಪೆಯಾಗು||25||

ಮಾಯಪಾಶವಹರಿದು | ಕಾಯೊ ನೀನೆನ್ನುವುದು ತಾಯಿಜನ್ಮದೊಳು-ಬೇಡಿದುದೀವಗುರು ತಾಯಿ ನೀನೆನಗೆ ಕೃಪೆಯಾಗು||26||

ಕಂದ ಬಾಎಂದುದಯ ನೀನೊಲಿದುಕರೆ ತಂದೆ ಬಸವಾದಿ ಪ್ರಮಥರಾ ಪಥಕೆನ್ನ ತಂದೆ ಶ್ರೀ ಗುರುವೆಕೃಪೆಯಾಗು||27||

ಜನಿಸಿದಾಕ್ಷಣವೆನಗೆ ಕೆನೆವಾಲು ಸವಿಸಕ್ಕೆ ಎನತೀರ್ಥ ಶೇಷ-ವನು ಊಡಿ ಪೊರೆದ ಜ್ಜನನಿ ಶ್ರೀ ಗುರುವೆಕೃಪೆಯಾಗು ||28||

ತಥ್ಯಮಿಥ್ಯವನಳಿದ | ಸತ್ಯಶರಣರಿಗೆ ನೀ ನೃತ್ಯನಾಗೆಂದು-ಮರ್ತ್ಯಲೋಕದೊಳೆನ್ನ ಪತ್ತಯ್ಯ ಶ್ರೀ ಗುರುವೆಕೃಪೆಯಾಗು||29||

ಶೈವ ಮಾರ್ಗದ ಭವದ | ನೋವ ತಾರಿಸಿ ವೀರ ಶೈವಾಮೃತ ಮೊಲೆಯನುಣಿಸಿ ಪೊರೆದೆನ್ನ ಹೆ ತತ್ವ ಶ್ರೀ ಗುರುವೆಕೃಪೆಯಗು||30||

ಉಪ್ಪುನೆಲ್ಲಿಯೂಕೂಡಿ | ಒಪ್ಪಿರುಚಿಗೊಡುವಚಿತೆ ತಪ್ಪದೆಂದೆಂದು-ಅಗಲುವಿಕೆಯಿಲ್ಲದೆ ನ್ನಪ್ಪ ಶ್ರೀ ಗುರುವೆಕೃಪೆಯಾಗು||31||

ಮಜೀವ ನಿಮ್ಮಪಾ | ದಾಬ್ದವನು ಭಜಿಸಿ ಹ ವ್ಯಜ್ಜಯ್ಯಗುರುವೆಕೃಪೆಯಾಗು||32||