#

ಮಂಗಲಕಾರಿ ದುರಿತವಿಹಾರಿ

మెంగలశారి ದುರಿತವಿಹಾರಿ | ನಿಗಮಾಗಮನುತ ಪರತರ ಸುಚರಿತ||ಪ||

ವೀರಶೈವಮತ ಜೀರ್ಣೋದ್ದಾರಿ |ಧರ್ಮಸಾರ ಶಾಸ್ತಾನುಸಾರಿ ಚರಮುರಾರಿ ಭೂತನಿಸ್ಸಾರಿ |ಮತಹಿತ ಕೃತಪಿತ ಪರತರ ಸುಚರಿತ ||1||

ಶ್ರೀ ಶಿವಯೋಗ ಸುಮಂದಿರ ಸ್ಥಾಪಿತ ವಿಧ್ಯಾಧ್ಯಯನ ಜನತಾದಿ ಪ್ರೀತಾ | ಭೂಧವಿಧಾತಾ ಭೋ ವಿಖ್ಯಾತಾ ಮತಹಿತ ಕೃತಪಿತ ಪರತರ ಸುಚರಿತ ||2||

ಕ್ರೂರ ಮನಸಿಜ ಸಾಯಕ ನಾಶಕ | ಶಿವ ಸುಖದಾಯಕ ಪಾವನ ರೂಪಕ ವರಸುಕುಮಾರಾ ಭವಭಯದೂರ | ಮತಹಿತ ಕೃತಪಿತ ಪರತರ ಸುಚರಿತ||3||