#

ಜ್ಞಾನಪೂರ್ಣಂ ಜಾಗಂ ಜ್ಯೋತಿ

ಜ್ಞಾನಪೂರ್ಣಂ ಜಾಗಂ ಜ್ಯೋತಿ | ನಿರ್ಮಲವಾದ ಮನವೇ ಕರ್ಪೂರದಾರುತಿ ||ಪ||

ಅನುದಿನ ಗುರುವಿನೊಳ್ ಅನುರಾಗ ಭಕ್ತಿಯಲಿ | ಜನನ ಮರಣ ರಹಿತ ಜಂಗಮಗೆ ಬೆಳಗಿರಿ ||1||

ನಾನೀನೆಂಬುದು ಬಿಡರಿ ನರಕವು ಪ್ರಾಪ್ತಿ | ಜ್ಞಾನಿಗಳೊಡನಾಡಿರಿ | ಹೀನ ವಿಷಯ ಜನ್ಮ ಹಿಂದುಳಿಸಿ ಲಿಂಗಕ್ಕೆ ದೇವನೆ ಗತಿಯಂದು ಮನಮೆಚ್ಚಿ ಬೆಳಗಿರಿ ||2||

ಅಷ್ಟವರ್ಣದ ಸ್ಫೂಲವು ಮಾನವ ಜನ್ನ | ಹುಟ್ಟಿ ಬರುವುದು ದುರ್ಲಭವು | ಕೊಟ್ಟಾನೊ ಶಿವ ಎಮಗೆ ಮಾಡಿದ ಫಲದಿಂದ ಹುಟ್ಟಿದ ಮಗನ್ನೆಸರು ಶಿವನೆಂದು ಕರೆಯಿರಿ ||3||