#

ಎಡೆಯೂರು ಸಿದ್ದಲಿಂಗ

ಎಡೆಯೂರು ಸಿದ್ದಲಿಂಗ ಎಡೆಯೂರು ಸಿದ್ಧಲಿಂಗ ವಿರತಿಗಾರುತಿ | ದೃಢಮನದಿ ಬೆಳಗಿ ಪಡೆಯಿರಯ್ಯ | ಸಂಪ್ರೀತಿ ||ಪ||

ಸಿದ್ಧ ಸಾಧ್ಯರುಗಳದ್ದಾರಕಾಗಿ ಅವತರಿಸಿ | ಸಿದ್ಧಗಂಗೆ ತೋರಿ ಶ್ರೀ ಸಿದ್ಧನಾಗಿ ಚರಿಸಿದ |ಮುಗ್ಧ ವೃದ್ಧೆ ಭಕ್ತಿ ಯಡೆಯ ಶುದ್ಧ ಮನದಿ ಸ್ವೀಕರಿಸಿ | ಮುದ್ದು ತಾಣ ತಾಯೆ ಇದುವೆ ಎಡೆಯೂರೆಂದೇಳಿದೆ ||1||

ಎಡೆಯೂರಿನ ಒಡೆಯ ನಿನ್ನಡಿಗೆ ಸಕಲವನು ನೀಡಿ | ಎಡಬಿಡದಿ ನಿನ್ನ ನುಡಿಯ ಗಾನ ಹಾಡಿ ನಲಿಯುವ | ಎಡರು ತೊಡರುಗಳ ನಡಗಿಸಿ ಬಿಡದಿ ಕಾಪಾಡಿ | ಜಡತನವ ಬಿಡಿಸಿ ಹೊರೆವ ಮೃಢಸಾಕ್ಷಾತ್ಕಾರಿ ||2||

ಸಾಮಗಾನ ಹಾಡಿ ಸೋಮನಿಳಗೆ ತಂದ ಗಾನಯೋಗಿ | ಭೀಮ ಕಾಯ ಪಂಚಾಕ್ಷರ ಹೃದ್ ಗದ್ದಿಗೆ ಏರಿದ | ಸೀಮ ಪುರುಷ ಪುಟ್ಟರಾಜ ಗುರುವಿನಿಂದ ಪೂಜೆಗೊಂಡ | ಸ್ವಾಮಿಸಿದ್ಧ ಲಿಂಗನೆಂದು ಕಲಿಪುರಂದ್ದೇಳಿದ||3||