#

ಭಕ್ತರ ಭಾಗ್ಯದ ಜ್ಯೋತಿ

ಮಾರ ಸಂಹರಗೆ ಶ್ರೀ ಗುರು ಶಾಂತವೀರರಿಗೆ ಭಕ್ತರ ಭಾಗ್ಯದ ಜ್ಯೋತಿಯಾಗಿ ಬೆಳಗುವಯತಿವರಗೆ||ಪ||

ಯೋಗ ಸಾಧಿಸುತ ಶ್ರೀ ಶಿವಯೋಗಿ ಯಾದವಗೆ ಗುರು ಶಿವಬಸವೇಶನ ಶಿಷ್ಯನಾಗಿ ಶೋಭಿಪ ಗುರುವರಗೆ ||1||

ಅನ್ನದಾಸೋಹ ಮನ್ನಣೆ ಮಾಡಿ ನಡೆಸುತಲಿ ತ ಶಿವನನು ಅನ್ನದಿ ಕಂಡ ಸಿಂದಗಿ ಧೀಶನಿಗೆ||2||

ಲಿಂಗ ಪೂಜಿಸುತ ಲಿಂಗವೇ ಯಾಗಿ ತೋರುತಲಿ ಶಿವರಾತ್ರಿಯಲಿ ಶಿವನನು ಸೇರಿದ ಶಾಂತವೀರೇಶನಿಗೆ||3||