#

ಜಯಮಂಗಲ ಪಾಡುವೆ

ಜಯ ಮಂಗಲಂ ನಿತ್ಯ ಶುಭಮಂಗಲಂ | ಜಯಜಯತು ಶಿಶು ಮಹಂತ ಲಿಂಗೇಶಗೆ ||ಪ||

ಧರೆಯ ಭಕ್ತರು ಮಹೇಶ್ವರರುಗಳ ಪುತ್ರನಿಗೆ | ಶರಣ ಬಸವಾದಿ ಪ್ರಮಥರಕಂದಗೆ || ಪರಶಿವನ ಪಾರ್ವತಿಯತೊಡೆಯ ಮೇಲಾಡುತಲಿ | ಹರುಷಾಬ್ಬಿ ಹೆಚ್ಚಿಸುವಗುರುಪುಗೆ ||1||

ಆಕಾಶವನು ಮೋಡ ಮುಸುಕಿದರುಕೆಡದಂತೆ | ಏಕಾಗ್ರಚಿತ್ತದಲಿ ಮನವನಿರಿಸಿ || ಬೇಕು-ಬೇಡೆಂಬೆರಡು ಭವಬೀಜಗಳ ಹುರಿದು | ಲೋಕದೊಳಗಿದ್ದು ಇಲ್ಲದ ಮಹಿಮಗೆ ||2||

ಹ್ಯಾಗೆಮಾಳ್ವರು ಹಾಗೆ ಸಕಲ ಉಪಚಾರಿಗಳು | ಮಂಗಲದ ಶಿಶುವಾಗಿ ಕೈಕೊಡುತಲಿ || ಬಂಗಾರಕಬ್ಬಿಣವ ಹಿರಿಕಿರಿದು ಸಮಗಂಡ ಲಿಂಗ ಮಹಾಂತೇಶಮಹಾನ್‌ಜಗತ್ ಪುತ್ರಗೆ ||3||