#

ಶಿವಮಂಗಲವನು ಕೊಡು

ಶಿವಮಂಗಲವನು ಕೊಡು ಬೇಗ ಭವದು:ಖದಿ ಬಳಲುವೆನೀಗ ಭುವಿಗವತರಿಸಿದ ಕಾರಣವ ಜವದೊಳು ನೆನೆಯುತಗುರುದೇವ ||ಪ||

ಮನುಜಜನ್ಮವನುತೊಟ್ಟಿಹೆವು ಘನಮಹಿಮರ ಪಥ ಬಿಟ್ಟಿಹೆವು | ಮನದಿ ಹೀನಗುಣತೊಡರಿಹವು ಮುನಿವಂದ್ಯನೆ ನಮಿಸುತ್ತಿಹವು||1||

ಹುಟ್ಟಿ-ಹುಟ್ಟಿ ಸಾಯ್ತುದ ನೋಡಿ ಕಷ್ಟತರದಿ ಬಹುಚರಿಸ್ಯಾಡಿ ದುಷ್ಟರೆನಿಸಿಕೊಂಬುದು ನೋಡಿ ಶಿಷ್ಟನೆ ನೀನತಿದಯ ಗೂಡಿ ||2||

ಇದ್ದ ಗುಣಗಳೆಲ್ಲವ ಮರೆಸಿ ಶುದ್ದಗುಣದಿ ಮನವನ್ನಿರಿಸಿ | ಸಿದ್ಧರಾಮ ಗುರು ದಯಕರಿಸಿ ತಿದ್ದುವದತಿ ನೀ ಮುದವಿರಿಸಿ ||3||