#

ಮಂಗಲ ಮಯದಾ ಸಿದ್ದೇಶನಾಮ

ಮಂಗಲ ಮಯದಾ ಸಿದ್ದೇಶನಾಮ ನುಡಿಯುದೇ ಬದುಕಿಗೆ ಮಂಗಳ ನೇಮ ಸಿದ್ದೇಶವೆಂದರೆ ಕಳೆಯುದು ಕರ್ಮ ಬ್ಯಾಡಗಿ ಮರದ ಬೆಳಕಿನ ಸೋಮ ||ಪ||

ಉಜೈನೀಶನೆ ಶ್ರೀ ಸಿದ್ದೇಶ ಮರುಳಸಿದ್ಧನೆ ಶ್ರೀ ಸಿದ್ದೇಶ ಅಗಣಿತ ಮಹಿಮನೆ ಶ್ರೀ ಸಿದ್ದೇಶ ಆನಂದಮಯನೆ ಶ್ರೀ ಸಿದ್ದೇಶ||1||

ಅನುಪಮ ತೇಜನೆ ಶ್ರೀ ಸಿದ್ದೇಶ ಅಮರಸುಚರಿತನೆ ಶ್ರೀ ಸಿದ್ದೇಶ ನಿಗಮಾತೀತನೆ ಶ್ರೀ ಸಿದ್ದೇಶ ಅಚಂದ್ರಾಕರ್ತನೆ ಶ್ರೀ ಸಿದ್ದೇಶ||2||

ನೀತಿ ರಕ್ಷಕ ಶ್ರೀ ಸಿದ್ದೇಶ ಪರಿಪೂರ್ಣಾತ್ಮ ಶ್ರೀ ಸಿದ್ದೇಶ ಪರಂಜ್ಯೋತಿಯು ಶ್ರೀ ಸಿದ್ದೇಶ ಪರಮಾತ್ಮನೇ ಶ್ರೀ ಸಿದ್ದೇಶ ||3||

ಶಾಂತವದನಾ ಶ್ರೀ ಸಿದ್ದೇಶ ಸರ್ವರಿಗೂ ಶಾಂತಿ ಕೊಡುವ ಶ್ರೀಸಿದ್ದೇಶ ಸರ್ವರನ್ನು ಕಾಯುವ ಈಶ ಸರ್ವರಕ್ಷಕ ಶ್ರೀ ಸಿದ್ದೇಶ||4||