#

ಶಿವ ಶಿವ

ಶಿವ ಶಿವ ಶಿವ ಶಿವ ಮಂಗಲಂ ದೇಹಿ ಭವಹರ ಸ್ಮರಹರ ಪುರಹರ ಪಾಹಿ || ಪ ||

ಭವ ಭಯದೊಳಗೆನ್ನ ಬರಸಿದೆ ಯಾಕೋ | ಭವಹರ ಸಾಕಿನ್ನು ದಯ ಮಾಡಬೇಕೋ||1||

ಕಷ್ಟ ದೇಹವ ನೆಚ್ಚಿ ಹುಟ್ಟಿತು ಜೀವ ಅಷ್ಟಮದಕೆ ಸಿಲುಕಿ ಕೆಟ್ಟಿನೋ ದೇವ ||2||

ಮಾನಾಪಮಾನಕೆ ನೀನೆ ದಯಾಳೊ । ಜ್ಞಾನದಾಯಕ ಸಿದ್ಧಲಿಂಗ ಕೃಪಾಳೊ ||3||