#

ಕುಮಾರ ಮಂಗಲ

ಯೋಗಿ ಕುಮಾರನೆ ಮಾರ ಸಂಹರನೆ | ಜಯ ಜಯಾ ಗುರು ಮಂಗಲಂ || ಪ ||

ವೀರ ಸಮಯಸಾರ | ಗೌರವ ತೋರಿದ | ಧೀರ ಸದಾಶಿವ ಸ್ವಾಮಿ ಸುಂದರನೇ ||1||

ಯೋಗಮಹಿತ ಮಾರ್ಗ ದಾಗಮ ಬೋಧಿಸಿ | ಮೇಗಣ ಭಾಗ್ಯವನುಂಡ ಪಂಡಿತನೆ||2||

ಜಂಗಮ ಗುರುಲಿಂಗ ಸಂಗಮನಂದದಿ | ಪಿಂಗಿತ ಜಂಗಮ ಲಿಂಗ ಮಂಗಲನೇ ||3||