#

ಜಯವೆಂದು ಬೆಳಗುವೆ ಸಿದಲಿಂಗನಿಗೆ

ಜಯವೆಂದು ಬೆಳಗುವೆ ಸಿದ್ಧಲಿಂಗನಿಗೆ | ಸಿದ್ಧಲಿಂಗನಿಗೆ ತೋಂಟದಾರ್ಯನಿಗೆ || ಪ ||

ಹುತ್ತದಿ ತಪಗೈದು ಸಿದ್ದಿ ಪಡೆದವಗೆ | ಶರಣನೆಂಬಣ್ಣ ಭಕ್ತಿಗೊಲಿದವಗೆ ||1||

ಜಲದಿ ದೀಪವ ಬೆಳಗಿ ಜಗಕೆ ತೋರಿದವಗೆ | ಹೊಳಲ-ಗುಂದದ ಮಾಯೆ ಸೇವೆಗೊಲಿದವಗೆ||2||

ಯಡೆಯೂರ ಕ್ಷೇತ್ರದೊಳ್ ಮೂರ್ತಿಗೊಂಡವಗೆ | ಬಂದ ಭಕ್ತರಿಗಿಷ್ಟ ಸಿದ್ಧಿ ಕೊಡುವವಗೆ ||3||