#

ಶ್ರೀ ವಿಶ್ವಾರಾಧ್ಯರಿಗೆ ಮಂಗಲ

ಶ್ರೀ ವಿಶ್ವಾರಾಧ್ಯಾಯ ಮಂಗಲಂ ಶಿವವಿಶ್ವಕ ಪಾಲಾಯ ಮಂಗಲಂ ವಿಶ್ವೇಶಜಾತಾಯ ವಿಶ್ವಾದಿ ಬೀಜಾಯ ಶ್ರೀ ವಿಶ್ವವಂದ್ಯಾಯ ಮಂಗಲಂ || ಪ ||

ಚರವೃಂದ ವಂದ್ಯಾಯ ಮಂಗಲಂ ವರ ಚರ ನೀತಿಬೋಧಾಯ ಮಂಗಲಂ | ಗುರುರೂಪಧಾರಾಯಗುರುರಾಜಿರಾಜಾಯ ಪರಿಪೂರ್ಣ ದೇಹಾಯ ಮಂಗಲಂ ||1||

ಭವಮೂಲ ಭಂಗಾಯ ಮಂಗಲಂ ಶಿವ ಶಿವಲಿಂಗ ಸಂಗಾಯ ಮಂಗಲಂ ಭವ ಮಂಗಲಾಂಗಾಯ ಶಿವಪಿಂಗ ಚೂಡಾಯ ಕವಿತುಂಗ ಸೇವಾಯ ಮಂಗಲe||2||

ಕಾಶೀಪುರೇಶಾಯ ಮಂಗಲಂ ಕವಿ ಕಾಶೀನಾಥೇಶಾಯ ಮಂಗಲಂ | ಕೇಶಾಪಹಾರಾಯ ಪಾಶಪ್ರಮೋಚಾಯ ಶ್ರೀ ಶಾದಿಮಾನ್ಯಾಯ ಮಂಗಲa ||3||