#

ಲಿಂಗೋದ್ಭವರಿಗೆ ಮಂಗಲ

ಮಂಗಲಮಯಮಹ ಲಿಂಗೋದ್ಭವರಿಗೆ ಮಂಗಲವೆನ್ನಿರಿಸಾಂಗದಲಿ ಅಂಗಜಭಂಗ ಶಿವಾಂಗಸಂಗ ಗುರುಲಿಂಗಜಂಗಮಾಚಾರ್ಯರಿಗೆ|| ಪ ||

ಕೋಣಿಯುಳಿರುತರ ಲೀಲಾ ವಿಸರದಿ ಕೋಣಿಯ ಪಾವನಗೈದವಗೇ। ಅಣುತೃಣಕಾಷ್ಠದೊಳನುದಿನ ನೆಲಸಿಹ ಗಣಕುಲ ನಾಯಕರೇಣುಕಗೇ ||1||

ಭೂರಿಮಹಿಮ ಭವದೂರ ನಿಗಮ ಸುವಿಚಾರ ಕಲುಷ-ಸಂಹಾರಕಗೆ | ವೀರಶೈವ ಸಮಯಾಂಬುಧಿ ಶಶಿಧರ ಸಾರಕರುಣಿಗುರುದಾರುಕಗೆ||2||

ಲೋಕದೊಳುತ್ತಮ ಖ್ಯಾತಿಯಧರಿಸುತ ಕಾಕು ಮತಂಗಳ ಜಯಿಸಿದಗೆ | ನಾಕ ಭವಾರ್ಚಿತ ನಾಕಗಮನಯುತ ಶೋಕಹರೈಕೋರಾಮರಿಗೆ ||3||

ಚಂಡಮಂಗಳ ಖಂಡಿಸಿ ಬ್ರಹ್ಮಾಖಂಡತತ್ವಂ ಬೋದಿಪಗೆ | ಖಂಡ ಪರಶುವಿನ ತುಂಡಜನಿತಚಿತಖಂಡ ಪಂಡಿತಾರಾಧ್ಯರಿಗೆ ||4||

ಈಶ್ವರ ಭಕ್ತಿಯ ಶಾಶ್ವತಗೊಳಿಸುತ ವಿಶ್ವಕೆಗುರುವಾಗಿರ್ಪರಿಗೆ | ವಿಶ್ವನಾಥನೊಳಗುದ್ಭವಿಸಿದ ಮಹಾವಿಕೃತ ವಿಶ್ವಾರಾಧ್ಯರಿಗೆ ||5||