#

ಜಯ ಜಯ ಹರ ಮಂಗಲ

ಮಂಗಲಮಯ ಮಹಂತಲಿಂಗ ದೇಶಿಕನೆ ಜಯಜಯ ಹರ ಮಂಗಲಂ || ಪ ||

ಜೀವಪರಮರೈಕ್ಯ ಭಾವವತೋರಿದ ಕೋವಿದ ಮದ್ಗುರುದೇವ ಸುಂದರನೆ ಜಯ ಜಯ ಹರ ಮಂಗಲಂ ||1||

ಲಿಂಗವ ಪೂಜಿಸಿ ಲಿಂಗವೇ ಆಗುವ ಇಂಗಿತವರೂಪಿತ ಕಂಗಳಾಲಯನೆ ಜಯ ಜಯ ಹರ ಮಂಗಲಂ ||2||

ನಾಮ ರೂಪಕಿಯಾ ಸೀಮೆಯ ಮೀರಿದ ಸ್ವಾಮಿ ಶ್ರೀ ಮಹಾಂತೇಶ ಪ್ರೇಮಿದಯಾಳು ಜಯ ಜಯ ಹರ ಮಂಗಲಂ ||3||