#

ಮಂಗಲಮಯ ಶಿವಯೋಗಿ ತ್ಯಾಗಿ

ಮಂಗಲಮಯ ಶಿವ ಯೋಗಿತ್ಯಾಗಿ ಅಥಣಿಯ ವಿರಾಗಿ ಮುರುಗೆಂದ್ರಯೋಗಿ ಧೀರವಿರಾಗಿ ಶ್ರೀ ಶಿವ ಯೋಗಿ || ಪ ||

ಶಕ್ತಿಯ ಶೀಲ ಭಕ್ತಿಯ ಬಾಲ ಮುಕ್ತಿಯ ಮೂಲ ಜಂಗಮ ಲೋಲ ಅಥಣಿಯವಾಸ ಶ್ರೀ ಮುರುಗೇಶ ಭವ ಪಾಶ ನಾಶ ಕರುಣಾಧೀಶ ||1||

ಪರಮ ನಿರಂಜನ ನಿತ್ಯ ನಿರ್ಮಲನೆ ಪ್ರಣವ ಸ್ವರೂಪನೆಕರುಣಾಂಕರನೆ ||2||

ಜ್ಞಾನಜ್ಯೋತಿ ಗಾನ ಮೂರ್ತಿ ಮೃತ್ಯುಂಜಯಗುರುವಿಗೆ ಬೆಳಗುವೆ ನಾರುತಿ|3||