#

ಕಾರುಣ್ಯಮೃಗಕರದೇವಗೆ

ಕರ್ಪೂರಾರತಿ ಬೆಳಗಿರೆ ಕಾರುಣ್ಯಮೃಗಕರದೇವಗೆ || ಪ ||

ನೀಲಕಂದರ ನಿಗಮಗೋಚರ ಬಾಲಗಂಗಾಧರನಿಗೆ | ಬಾಲಗೊಲಿದನು ಹಾಲ ಸವಿದನು ಲೋಲ ಶ್ರೀ ಗುರುರಾಯಗೆ ||1||

ವಾರಿಜೋದ್ಭವ ಶಿರವ ಹರಿದಿಹ ಮಾರಹರ ಮಹದೇವಗೆ | ಘೋರದುರಿತವ ದೂರಮಾಡುವ ಶೂರ ಷಣ್ಮುಖನಯ್ಯಗೆ ||2||

ಶರಣಜನರಿಗೆ ವರವನಿತ್ತಿಹ ಪರಮ ಪಾರ್ವತಿಯರಸಗೆ. ಧರೆಯೊಳಧಿಕವಾದ ಅಥಣಿಯ ಪುರದ ಶ್ರೀ ಶಿವಯೋಗಿಗೆ ||3||