#

ಕೊಡು ಮಂಗಲವನು ಶಾಂತವೀರೇಶಾ

ಕೊಡು ಮಂಗಲವನು ಶಾಂತವೀರೇಶಾ ಬಿಡದೇ ಭಜಿಸುವೆ ಮುಕ್ತಿಯ ಕೋಶಾ || ಪ ||

ಬಡವರ ಬಂಧು ದಯಾನಿಧಿ ಸಿಂಧು ಕರುಣದಿ ಕಾಯೋ ನೀ ಶಾಂತಿಸಾಗರನೇ ||1||

ಕಳ್ಳ ಸುಳ್ಳರಿಗೆ ನೀತಿ ಪೇಳಿ ಮಾನವ ರಾಗಲು ಅರುಹಿದ ಗುರುವೆ ||2||

ಧರೆಯೋಳು ಹಾವೇರಿ ಪುರದೊಳು ಶೋಭಿಪ ಸಿಂದಗಿ ಹಿರೇಮಠ ದಿವ್ಯ ಪ್ರಕಾಶ ಕೊಡು ಮಂಗಲವನು||3||