#

ಎಲ್ಲವು ನಿನದಲ್ಲವೇ

ನೀ ಇತ್ತ ವರವಲ್ಲವೆ ಓ ಸ್ವಾಮಿ ಈ ಹೂವು ಹಣ್ಣುಗಳು ನೀ ಕೊಟ್ಟ ವರವಲ್ಲವೇ ಓ ಸ್ವಾಮಿ ಈ ನಮ್ಮ ಕಣ್ಣುಗಳು ಈ ಭೂಮಿ ಈ ಭಾನು ಈ ದೇಹ ಈ ಪ್ರಾಣ ಎಲ್ಲವು ನೀನದಲ್ಲವೇ || ಪ ||

ಪಂಪಾನದಿಯ ನೀರು ಅಲೆಯಲ್ಲ ನಿನ್ನದು ತಂಪಾಗಿ ಸರಿಯುವ ಮಳೆಯಲ್ಲ ನಿನ್ನದು ಈಗಾಳಿ ಈ ನೀರು ಈ ಮೋಡ ಆ ಮುಗಿಲು ಎಲ್ಲವು ನಿನದಲ್ಲವೇ ||1||

ಗಿಳಿಯ ಕೋಗಿಲೆಗಳ ಸ್ವರವೆಲ್ಲ ನಿನ್ನದು ಪಂಚವಾದ್ಯದ ಮೇಳ ಲಯವೆಲ್ಲ ನಿನ್ನದು ಈ ರಾಗ ಈ ತಾಳ ಈ ಹಾಡು ಈ ಇಂದು ಎಲ್ಲವು ನಿನದಲ್ಲವೇ ||2||

ಮಿನುಗುವ ಚುಕ್ಕೆಯ ಹೊಳಪೆಲ್ಲ ನಿನ್ನದು ಕಾಮನ ಬಿಲ್ಲಿನ ಬಣ್ಣವೆಲ್ಲ ನಿನ್ನದು ಈಚಂದ್ರ ಈ ರಾತ್ರಿ ಈ ಹಗಲು ಎಲ್ಲವು ನಿನದಲ್ಲವೇ ||3||

ಈ ನಮ್ಮ ನರಜನ್ಮ ನೀ ಕೊಟ್ಟ ವರವು ಸರ್ವಾಂಗ ಚೇತನ ನೀ ಇತ್ತ ವರವು ಈ ಮನವು ಈ ಮನಸು ಈ ಭಕ್ತಿ ಆ ಮುಕ್ತಿ ಎಲ್ಲವು ನಿನದಲ್ಲವೇ ||4||