#

ಎತ್ತುವೆ ನಾರುತಿ ಈಶನಿಗೆ

ಎತ್ತುವೆ ನಾರುತಿ ಈಶನಿಗೆ ಈಶನಿಗೆ ಸರ್ವಶನಿಗೆ|| ಪ ||

ವೇದಾಗೋಚರ ಸಾಧು ಸತ್ಪುರುಷರ ರಾಗರಹಿತ ಪರ ಶಾಂತನಿಗೆ ನೂತಕಾಂತನಿಗೆ ||1||

ಗಂಗಾಧರ ಭವ ಭಂಗ ಸ್ವರೂಪಗೆ ಮಂಗಲಕರನುತ ನಾಮನಿಗೆ. ನಾಮನಿಗೆ ನುತ ಶಾಮನಿಗೆ ||2||

ಧರೆಯೊಳು ಹಾವೇರಿ ಪುರದೊಳುಶೋಬಿಪ ವರಗುರು ಶಿವಬಸವೇಶನಿಗೆ ಈಶನಿಗೆ ಸರ್ವೆಶನಿಗೆ ||3||

ವಂದನೆ ವಂದನಂ ಶಾಂತವೀರಾಯ ಗುರುರೂಪಾಯ ಮಂಗಲಂ ಸತ್ಯಾಯ ಶುದ್ದ ಚರಿತಾಯ ಶಾಂತಾಯ ಶುಭ ಮಂಗಲಂ ||4||